印度阿卡纳语:
http://www.google.com/intl/kn/help/features.htmlವೆಬ್ ಹುಡುಕಾಟದ ವೈಶಿಷ್ಟ್ಯಗಳು
ಬಿಲಿಯಾಂತರ ವೆಬ್ ಪುಟಗಳಿಗೆ ಸುಲಭ ಪ್ರವೇಶವನ್ನು ಒದಗಿಸುವುದರ ಜೊತೆಗೆ, ನೀವು ಏನನ್ನು ಹುಡುಕುತ್ತಿದ್ದೀರೋ, ಅದನ್ನೇ ನಿಖರವಾಗಿ ಪಡೆಯಲು ಸಹಾಯ ಮಾಡುವಂತಹ ವಿಶೇಷ ವೈಶಿಷ್ಟ್ಯಗಳನ್ನು Google ಹೊಂದಿದೆ. ಒಂದು ನಿರ್ಧಿಷ್ಠ ವೈಶಿಷ್ಟ್ಯದ ಬಗ್ಗೆ ಇನ್ನಷ್ಟು ತಿಳಿಯಲು, ಅದರ ಮೇಲೆ ಕ್ಲಿಕ್ ಮಾಡಿ.
• ಪುಸ್ತಕ ಹುಡುಕಾಟ ಪುಸ್ತಕಗಳ ಸಂಪೂರ್ಣ ಪಠ್ಯವನ್ನು ಹುಡುಕಲು Google ಬಳಸಿ.
• ಸಂಗ್ರಹಿಸಿದ ಲಿಂಕ್‌ಗಳು ನಾವು ಇಂಡೆಕ್ಸ್ ಮಾಡಿದಾಗ ಕಂಡಂತೆಯೇ ಕಾಣುವ ಪ್ರತೀ ಪುಟದ ಒಂದು ಚಿತ್ರಣವನ್ನು ನೋಡಿರಿ.
• ಕ್ಯಾಲ್ಕುಲೇಟರ್ ಗಣಿತ ಲೆಕ್ಕಗಳನ್ನು ಮಾಡಲು Google ಬಳಸಿ.
• ಹಣ ಪರಿವರ್ತನೆ ಯಾವುದೇ ಹಣ ಪರಿವರ್ತನೆಯನ್ನು ಸುಲಭವಾಗಿ ಮಾಡಿ.
• ವ್ಯಾಖ್ಯಾನಗಳು ವಿವಿಧ ಆನ್‌ಲೈನ್ ಮೂಲಗಳಿಂದ ಪದಕೋಶ ವ್ಯಾಖ್ಯಾನಗಳನ್ನು ಪಡೆಯಲು Google ಬಳಸಿ.
• ಕಡತ ವಿಧಗಳು PDF ಮತ್ತು ಇತರ ದಾಖಲಾತಿಗಳನ್ನೂ ಒಳಗೊಂಡಂತೆ HTML ಅಲ್ಲದ ಮಾದರಿಗಳಿಗಾಗಿ ಹುಡುಕಿ.
• ಗ್ರೂಪ್ಸ್ ನಿಮ್ಮ ವೆಬ್ ಹುಡುಕಾಟದ ಫಲಿತಾಂಶಗಳಲ್ಲಿ ಸೂಕ್ತ Google ಗ್ರೂಪ್ಸ್‌ನ ಪೋಸ್ಟ್‌ಗಳನ್ನು ಸಹ ಪಡೆಯಿರಿ .
• ನಾನು ಅದೃಷ್ಟಶಾಲಿ ನಮ್ಮ ಫಲಿತಾಂಶಗಳನ್ನು ದಾಟಿ, ನಿಮ್ಮ ಪ್ರಶ್ನೆಗೆ ಒದಗಿಸಲಾದ ಮೊದಲ ವೆಬ್ ಪುಟಕ್ಕೆ ಹೋಗಿ.
• ಚಿತ್ರಗಳು ನಿಮ್ಮ ವೆಬ್ ಹುಡುಕಾಟದ ಫಲಿತಾಂಶಗಳಲ್ಲಿ ಸೂಕ್ತ ಚಿತ್ರಗಳನ್ನು ಪಡೆಯಿರಿ.
• ಸ್ಥಳೀಯ ಹುಡುಕಾಟ ಯು.ಎಸ್., ಯು.ಕೆ., ಮತ್ತು ಭಾರತಗಳಲ್ಲಿ ಸ್ಥಳಿಯ ವ್ಯಾಪಾರಗಳು ಮತ್ತು ಸೇವೆಗಳನ್ನು ಹುಡುಕಿ.
•• ಚಲನಚಿತ್ರಗಳು ನಿಮ್ಮ ಸ್ಥಳದಲ್ಲಿ ಪ್ರದರ್ಶಿಸಲಾಗುತ್ತಿರುವ ಚಲನಚಿತ್ರಗಳ ವಿಮರ್ಶೆ ಮತ್ತು ಪ್ರದರ್ಶನ ಸಮಯಗಳನ್ನು ತಿಳಿಯಲು Google ಬಳಸಿ.
• ಸಂಗೀತ ಪರಿಶೋಧನೆ ವಿಶಾಲ ಶ್ರೇಣಿಯ ಸಂಗೀತ ಮಾಹಿತಿಗೆ ಶೀಘ್ರ ಪ್ರವೇಶ ಪಡೆಯಲು Google ಬಳಸಿ.
• ಪ್ರಮುಖ ಸುದ್ಧಿಗಳು ಪ್ರಚಲಿತ ಸುದ್ಧಿಗಳೊಂದಿಗೆ ನಿಮ್ಮ ಹುಡುಕಾಟದ ಫಲಿತಾಂಶಗಳನ್ನು ವೃದ್ಧಿಸುತ್ತದೆ.
• ದೂರವಾಣಿ ಪುಸ್ತಕ ಯು.ಎಸ್. ರಸ್ತೆ ವಿಳಾಸ ಮತ್ತು ದೂರವಾಣಿ ಸಂಖ್ಯೆ ಕುರಿತ ಮಾಹಿತಿಯನ್ನು ಪಡೆಯಿರಿ.
• ಪ್ರೊಡಕ್ಟ್ ಹುಡುಕಾಟ ಆನ್‌ಲೈನ್‌ನಲ್ಲಿ ಮಾರಾಟವಾಗುತ್ತಿರುವ ಒಂದು ಉತ್ಪನ್ನವನ್ನು ಹುಡುಕಲು, Google ಪ್ರೊಡಕ್ಟ್ ಹುಡುಕಾಟವನ್ನು ಬಳಸಿ.
• ಪ್ರ&ಉ ನೇರವಾದ ಪ್ರಶ್ನೆಗಳಿಗೆ ಶೀಘ್ರ ಉತ್ತರ ಪಡೆಯಲು Google ಬಳಸಿ.
• ನಿಮ್ಮ ಹುಡುಕಾಟವನ್ನು ಉತ್ತಮಪಡಿಸಿ - ಹೊಸದು! ನಿಮ್ಮ ಫಲಿತಾಂಶಗಳನ್ನು ಕೇಂದ್ರೀಕರಿಸಲು ಮತ್ತು ಅಭಿವೃದ್ಧಿಪಡಿಸಲು ನಿಮ್ಮ ಹುಡುಕಾಟಕ್ಕೆ ತಕ್ಷಣದ ಮಾಹಿತಿ ಮತ್ತು ಶೀರ್ಷಿಕೆ-ನಿಗದಿತ ಲಿಂಕ್‌ಗಳನ್ನು ಸೇರಿಸಿ.
• ಫಲಿತಾಂಶಗಳನ್ನು ಪಡೆಯುವುದು ಫೈರ್‌ಫಾಕ್ಸ್‌ನಲ್ಲಿ ಹುಡುಕಾಟವನ್ನು ಕ್ಷಿಪ್ರವಾಗಿಸುತ್ತದೆ.
• ಸಂಖ್ಯೆಯ ಆಧಾರದಲ್ಲಿ ಹುಡುಕಿ ಪ್ಯಾಕೇಜ್ ಟ್ರಾಕಿಂಗ್ ಮಾಹಿತಿ, ಯುಎಸ್ ಪೇಟೆಂಟ್‌ಗಳು ಮತ್ತು ವೈವಿಧ್ಯಮಯ ಆನ್‌ಲೈನ್ ಡೇಟಾಬೇಸ್‌ಗಳನ್ನು ಪ್ರವೇಶಿಸಲು Google ಬಳಸಿ.
• ಹೋಲುವ ಪುಟಗಳು ಒಂದು ನಿರ್ದಿಷ್ಟ ಫಲಿತಾಂಶಕ್ಕೆ ಸಂಬಂಧಿಸಿದ ಪುಟಗಳನ್ನು ಪ್ರದರ್ಶಿಸುತ್ತದೆ.
• ಸೈಟ್ ಹುಡುಕಾಟ ಒಂದು ನಿರ್ದಿಷ್ಟ ಸೈಟ್‌ಗೆ ನಿಮ್ಮ ಹುಡುಕಾಟವನ್ನುನಿರ್ಬಂಧಿಸಿ.
• ಪದ ಪರೀಕ್ಷಕ ಪ್ರಶ್ನೆಗಳಿಗೆ ಪರ್ಯಾಯ ಶಬ್ದಗಳನ್ನು ಒದಗಿಸುತ್ತದೆ.
• ಸ್ಟಾಕ್ ಮತ್ತು ಫಂಡ್ ಕೋಟ್‌ಗಳು ಪ್ರಸ್ತುತ ಸ್ಟಾಕ್ ಮತ್ತು ಮ್ಯೂಚುವಲ್ ಫಂಡ್ ಕೋಟ್‌ಗಳನ್ನು ಹಾಗೂ ಮಾಹಿತಿಯನ್ನು ಪಡೆಯಲು Google ಬಳಸಿ.
• ರಸ್ತೆ ನಕ್ಷೆಗಳು ಯು.ಎಸ್. ರಸ್ತೆ ನಕ್ಷೆಗಳನ್ನು ಕಂಡುಹಿಡಿಯಲು Google ಬಳಸಿ.
• ಪ್ರಯಾಣ ಮಾಹಿತಿ .ಭಾರತದಲ್ಲಿ ಒಂದು ಏರ್‌ಲೈನ್ ಹಾರಾಟದ ಸ್ಥಿತಿಯನ್ನು ಅಥವಾ ವಿಮಾನನಿಲ್ದಾಣದಲ್ಲಿನ ವಿಳಂಬ ಮತ್ತು ಹವಾಮಾನ ಪರಿಸ್ಥಿತಿಗಳನ್ನು ತಿಳಿದುಕೊಳ್ಳಿ.
• ಹವಾಮಾನ ಯು.ಎಸ್.ನಲ್ಲಿನ ಯಾವುದೇ ಪ್ರದೇಶದ ಪ್ರಸ್ತುತ ಹವಾಮಾನ ಪರಿಸ್ಥಿತಿಗಳು ಮತ್ತು ಮುನ್ಸೂಚನೆಯನ್ನು ತಿಳಿದುಕೊಳ್ಳಿ.
• ವೆಬ್ ಪುಟದ ಭಾಷಾಂತರ ಇತರ ಭಾಷೆಗಳ ವೆಬ್ ಪುಟಗಳಿಗೆ ನಿಮಗೆ ಪ್ರವೇಶವನ್ನು ಒದಗಿಸುತ್ತದೆ.
• ನಿಮಗೆ ಯಾರು ಲಿಂಕ್‌ಗಳನ್ನು ಹೊಂದಿದ್ದಾರೆ? ಒಂದು ನಿರ್ದಿಷ್ಟ URLಗೆ ಕೊಂಡೊಯ್ಯುವ ಪುಟಗಳನ್ನು ಹುಡುಕಿ.
ಪುಸ್ತಕ ಹುಡುಕಾಟ
ಪುಸ್ತಕಗಳನ್ನು ಆನ್‌ಲೈನ್‌ಗೆ ತರುವ ಮೂಲಕ Google, ಪ್ರಪಂಚದ ಮಾಹಿತಿಯು ಆನ್‌ಲೈನ್‌ಗೆ ಬರುವಲ್ಲಿ ನೆರವಾಗುತ್ತಿದೆ. ನಿಮ್ಮ ಹುಡುಕಾಟ ಪಠ್ಯಗಳು, ನಮ್ಮ Google ಪುಸ್ತಕ ಹುಡುಕಾಟ ಇಂಡೆಕ್ಸ್‌ನಲ್ಲಿರುವ ಪುಸ್ತಕಗಳು ಹೊಂದಿರುವ ವಿಷಯಗಳಿಗೆ ಹೊಂದಾಣಿಕೆಯಾದಲ್ಲಿ, ನೀವು ಆ ಪುಸ್ತಕಗಳ ಲಿಂಕ್‌ಗಳನ್ನು ಫಲಿತಾಂಶ ಪುಟದ ಮೇಲ್ಭಾಗದಲ್ಲಿ, ಪುಸ್ತಕ ಫಲಿತಾಂಶಗಳ ತಲೆಬರಹದ ಅಡಿಯಲ್ಲಿ ನೋಡುತ್ತೀರಿ. ಯಾವುದಾದರೂ ಪುಸ್ತಕ ಶೀರ್ಷಿಕೆಯ ಮೇಲೆ ಕ್ಲಿಕ್ ಮಾಡಿರಿ ಮತ್ತು ನೀವು ಆ ಪುಸ್ತಕದಲ್ಲಿ ನಿಮ್ಮ ಹುಡುಕಾಟದ ಪಠ್ಯವಿರುವ ಪುಟವನ್ನು , ಜೊತೆಗೆ ಶೀರ್ಷಿಕೆಯ ಬಗ್ಗೆ ಇತರ ಮಾಹಿತಿ ಸಹ ಇರುವುದನ್ನು ನೋಡುತ್ತೀರಿ. " Buy this Book" ಎಂಬುದರ ಕೆಳಗಿರುವ ಲಿಂಕ್‌ಗಳಲ್ಲಿ ಒಂದನ್ನು ಕ್ಲಿಕ್ ಮಾಡಿದರೆ, ನಿಮ್ಮನ್ನು ನೇರವಾಗಿ ಆ ಪುಸ್ತಕವನ್ನು ಮಾರುತ್ತಿರುವ ಒಂದು ಆನ್‌ಲೈನ್ ಪುಸ್ತಕ ಮಳಿಗೆಗೆ ಕೊಂಡೊಯ್ಯುತ್ತದೆ..
ಉದಾಹರಣೆಗಾಗಿ:
ಸಂಗ್ರಹಿಸಿದ ಲಿಂಕ್‌ಗಳು
Google ವೆಬ್ ಮೂಲಕ ಹಾದುಹೋಗುವಾಗ ತಾನು ಪರೀಕ್ಷಿಸಿದ ಪ್ರತೀ ಪುಟದ ಒಂದು ಚಿತ್ರವನ್ನು ತೆಗೆದುಕೊಳ್ಳುತ್ತದೆ ಮತ್ತು ಒಂದು ವೇಳೆ ಮೂಲ ಪುಟವು ಅಲಭ್ಯವಾದಲ್ಲಿ ಇವುಗಳನ್ನು ಬ್ಯಾಕ್-ಅಪ್‌ನಂತೆ ಸಂಗ್ರಹಿಸುತ್ತದೆ. ನೀವು "ಸಂಗ್ರಹಿಸಿದ" ಲಿಂಕ್‌ನ ಮೇಲೆ ಕ್ಲಿಕ್ ಮಾಡಿದಲ್ಲಿ, ನಾವು ಇಂಡೆಕ್ಸ್ ಮಾಡಿದಾಗ ಕಂಡಂತಹ ರೀತಿಯಲ್ಲಿ ನೀವು ವೆಬ್ ಪುಟವನ್ನು ಕಾಣುತ್ತೀರಿ. ಒಂದು ಪುಟವು ನಿಮ್ಮ ಪ್ರಶ್ನೆಗೆ ಸೂಕ್ತವಾದ ಪುಟವೇ ಎಂಬುದನ್ನು ತೀರ್ಮಾನಿಸಲು Google ಈ ಸಂಗ್ರಹಿಸಿದ ಕಂಟೆಂಟನ್ನು ಉಪಯೋಗಿಸುತ್ತದೆ.
ಸಂಗ್ರಹಿಸಿದ ಪುಟವನ್ನು ಪ್ರದರ್ಶಿಸಿದಾಗ, ಆ ಪುಟದ ಮೇಲ್ಗಡೆಯಲ್ಲಿ, ಈ ಪುಟವು ಮೂಲ ಪುಟದ ಇತ್ತೀಚಿನ ಆವೃತ್ತಿಯಾಗಿಲ್ಲದಿರಬಹುದು ಎಂಬುದನ್ನು ನೆನಪಿಸುವ ಒಂದು ತಲೆಬರಹವನ್ನು ಹಾಕಲಾಗಿರುತ್ತದೆ. ನಿಮ್ಮ ಪುಟವು ಏಕೆ ಸೂಕ್ತವಾಗಿದೆ ಎಂಬುದನ್ನು ವೀಕ್ಷಿಸಲು ಅನುವಾಗುವಂತೆ ಸಂಗ್ರಹಿಸಿದ ಆವೃತ್ತಿಯಲ್ಲಿ ನಿಮ್ಮ ಪ್ರಶ್ನೆಗೆ ಸರಿಹೊಂದುವ ಪಠ್ಯವನ್ನು ಹೈಲೈಟ್ ಮಾಡಲಾಗಿರುತ್ತದೆ.
ಇಂಡೆಕ್ಸ್ ಮಾಡದಿರುವ ಸೈಟ್‌ಗಳಲ್ಲಿ ಹಾಗೂ ತಮ್ಮ ಕಂಟೆಂಟನ್ನು ಸಂಗ್ರಹಿಸದಿರುವಂತೆ ಕೋರಿರುವ ಮಾಲೀಕರ ಸೈಟ್‌ಗಳಲ್ಲಿ "ಸಂಗ್ರಹಿಸಿದ" ಲಿಂಕ್‌ಗಳು ಕಂಡುಬರುವುದಿಲ್ಲ,
Google
... ನಮ್ಮಲ್ಲಿ ಜಾಹೀರಾತು ನೀಡಿ - ವ್ಯಾಪಾರೀ ಪರಿಹಾರಗಳು - ಸೇವೆಗಳು & ಸಾಧನಗಳು - ಉದ್ಯೋಗಗಳು,
ಪ್ರೆಸ್, & ಸಹಾಯ ©2010 Google - 4,285,199,774 ವೆಬ್‍ಪುಟಗಳನ್ನು ಹುಡುಕುತ್ತಿದ್ದೇವೆ.
www.google.com/ - 3k - ನವೆಂ 26, 2004 - » ಸಂಗ್ರಹಿಸಿದ « - ಹೋಲುವ ಪುಟಗಳು
ಕ್ಯಾಲ್ಕುಲೇಟರ್
ಗೂಗಲ್‌ನ ಬಿಲ್ಟ್-ಇನ್ ಕ್ಯಾಲ್ಕುಲೇಟರನ್ನು ಉಪಯೋಗಿಸಲು, ನೀವು ಮಾಡಬೇಕಿರುವ ಲೆಕ್ಕವನ್ನು ಹುಡುಕಾಟದ ಚೌಕದಲ್ಲಿ ನಮೂದಿಸಿ ಎಂಟರ್ ಕೀ ಒತ್ತಿರಿ ಅಥವಾ Google ಹುಡುಕಾಟದ ಗುಂಡಿಯನ್ನು ಕ್ಲಿಕ್ ಮಾಡಿ. ಈ ಕ್ಯಾಲ್ಕುಲೇಟರ್ ಸಾಮಾನ್ಯ ಲೆಕ್ಕ, ಹೆಚ್ಚು ಸಂಕೀರ್ಣವಾದ ಲೆಕ್ಕ, ಅಳತೆ ಮತ್ತು ಪರಿವರ್ತನೆಗಳ ಘಟಕಗಳು ಮತ್ತು ಭೌತಶಾಸ್ತ್ರದ ನಿಯತಾಂಕಗಳನ್ನು ಪರಿಹರಿಸಬಲ್ಲದ್ದಾಗಿದೆ. ಈ ಕೆಳಗಿನ ಯಾವುದಾದರೂ ಒಂದು ಲೆಕ್ಕವನ್ನು ಪ್ರಯತ್ನಿಸಿರಿ ಅಥವಾ ನಿಮ್ಮದೇ ಆದ ಲೆಕ್ಕವನ್ನು ಪರಿಹರಿಸಲು ನಮ್ಮ ಸಂಪೂರ್ಣ ಸೂಚನೆಗಳನ್ನು ನೋಡಿರಿ.
ಇಲ್ಲಿ ಉದಾಹರಿಸಿರುವ ಪ್ರಶ್ನೆಗಳು ಈ ಹೊಸ ವೈಶಿಷ್ಟ್ಯದ ಉಪಯೋಗ ಮತ್ತು ಸಾಮರ್ಥ್ಯವನ್ನು ತೋರಿಸುತ್ತದೆ: